Dr Lodaya Hospital

IUI

ಹಾವೇರಿಯ ಅತ್ಯುತ್ತಮ ಐ.ಯು.ಐ ಟ್ರೀಟ್ಮೆಂಟ್

ಇಂಟ್ರಾ ಯುಟೆರಿನ್ ಇನ್ಸೆಮಿನೇಶನ್ (ಐ.ಯು.ಐ) ಮಕ್ಕಳಿಗಾಗಿ ಪ್ರಯತ್ನಿಸುತ್ತಿರುವ ದಂಪತಿಗಳಿಗೆ ಈ ಪದ್ಧತಿ ಒಂದು ಆಶಾಕಿರಣವಾಗಿದೆ. ಈ ಕೃತಕ ಸಂತಾನೋತ್ಪತ್ತಿ ತಂತ್ರ ಮಹಿಳೆಯ ಅಂಡಾಣುವಿನ ಉತ್ಪತ್ತಿಯ ಸಮಯದಲ್ಲಿ ವೀರ್ಯಾಣುವನ್ನು ನೇರವಾಗಿ ಗರ್ಭಾಶಯದಲ್ಲಿ ಇರಿಸುವ ಪದ್ಧತಿಯಾಗಿದೆ. ಇದು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅದರ ಹಾನಿಕಾರಕವಲ್ಲದ ಗುಣ ಮತ್ತು ಹೆಚ್ಚಿನ ಯಶಸ್ಸಿನ ಕಾರಣದಿಂದ ಐ.ಯು.ಐ ಬಂಜೆತನ ಸಮಸ್ಯೆ ಅನುಭವಿಸುತ್ತಿರುವ ತಂದೆ ತಾಯಿಗಳಿಗೆ ಮಕ್ಕಳನ್ನು ಪಡೆಯಲು ಉತ್ತಮ ದಾರಿಯಾಗಿದೆ.
ಡಾ. ಲೋಡಾಯಾ ಆಸ್ಪತ್ರೆ ಅದರ ಅತ್ಯುತ್ತಮ ಐ.ಯು.ಐ ಚಿಕಿತ್ಸೆಗೆ ಹಾವೇರಿಯಲ್ಲಿ ಹೆಸರುವಾಸಿಯಾಗಿದೆ. ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಐ.ಯು.ಐ ಸುಧಾರಿತ ಆರೈಕೆ ಮತ್ತು ಸುಧಾರಿತ ತಂತ್ರಗಳ ಮೂಲಕ ಪರಿಹಾರವನ್ನು ನೀಡುತ್ತದೆ. ನಮ್ಮ ಆಸ್ಪತ್ರೆಯಲ್ಲಿನ ಸಹಾನುಭೂತಿ ಪೂರ್ವಕ ಆರೈಕೆ ಮತ್ತು ಹೆಚ್ಚಿನ ಸಂಖ್ಯೆಯ ಯಶಸ್ವಿ ಚಿಕಿತ್ಸೆಗಳು ಅತ್ಯುತ್ತಮ ಐ.ಯು.ಐ ಚಿಕಿತ್ಸೆ ಬಯಸುವವರಿಗೆ, ನಮ್ಮ ಆಸ್ಪತ್ರೆಯು ಮೊದಲ ಆಯ್ಕೆಯಾಗಿದೆ. ನಮ್ಮ ಪರಿಣಿತಿ ಮತ್ತು ಅನುಭವಪೂರ್ಣ ತಿಳುವಳಿಕೆ ನಿಮ್ಮ ಮಾತೃತ್ವದ ಪ್ರಯಾಣಕ್ಕೆ ಬೆಂಬಲವಾಗಲಿದೆ.

ಐ.ಯು.ಐ ಚಿಕಿತ್ಸೆಯ ಪ್ರಮುಖ ಲಕ್ಷಣಗಳು

ಅಂಡೋತ್ಪತ್ತಿಯ ಮೇಲ್ವಿಚಾರಣೆ: ಐ.ಯು.ಐ ಚಿಕಿತ್ಸೆಯು ಮಹಿಳೆಯ ಅಂಡೋತ್ಪತ್ತಿ ಸೈಕಲ್ ಅನ್ನು ಗಮನವಿಟ್ಟು ಮೇಲ್ವಿಚಾರಣೆ ಮಾಡುವ ಮೂಲಕ ಪ್ರಾರಂಭವಾಗುತ್ತದೆ. ಗರ್ಭಧಾರಣೆಗೆ ಸೂಕ್ತ ಸಮಯದಲ್ಲಿ ಈ ವಿಧಾನವನ್ನು ಕಾರ್ಯಗತಗೊಳಿಸುವುದು ಇದರ ಉದ್ದೇಶವಾಗಿರುತ್ತದೆ..

ವೀರ್ಯ ಸ್ವಚ್ಛಗೊಳಿಸುವಿಕೆ ಮತ್ತು ತಯಾರಿ: ಗರ್ಭಧಾರಣೆಯ ಮೊದಲು, ವೀರ್ಯ ದ್ರವದಿಂದ ಚಲನಶೀಲ ಮತ್ತು ಆರೋಗ್ಯಕರ ವೀರ್ಯಾಣುಗಳನ್ನು ಬೇರ್ಪಡಿಸಿ, ಸೂಕ್ಷ್ಮ ಸಂಸ್ಕರಣೆ ಮಾಡಿದ ನಂತರ ವೀರ್ಯದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಇದು ಫಲೀಕರಣದ (ಫರ್ಟಿಲೈಜೇಶನ್) ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ನೇರವಾಗಿ ವೀರ್ಯಾಣುವನ್ನು ಇರಿಸುವುದು:  ಈ ವಿಧಾನದ ಸಮಯದಲ್ಲಿ, ಸಾಂದ್ರೀಕೃತ ವೀರ್ಯವನ್ನು ತೆಳುವಾದ ಕ್ಯಾಥೆಟರ್ ಮೂಲಕ ನೇರವಾಗಿ ಮಹಿಳೆಯ ಗರ್ಭಾಶಯಕ್ಕೆ ಸೇರಿಸಲಾಗುತ್ತದೆ. ಸಂತಾನೋತ್ಪತ್ತಿ ನಾಳದಲ್ಲಿನ ಸಂಭಾವ್ಯ ಅಡೆತಡೆಗಳನ್ನು ಬೈಪಾಸ್ ಮಾಡಿ ವೀರ್ಯವನ್ನು ಅಂಡಾಣುವಿಗೆ ಹತ್ತಿರ ತರುತ್ತದೆ.

ಹಾನಿಕಾರಕವಲ್ಲದ ಗುಣ: ಅತ್ಯಾಧುನಿಕ ಫಲವತ್ತತೆ ಚಿಕಿತ್ಸೆಗಳಿಗೆ ಹೋಲಿಸಿದರೆ, ಐ.ಯು.ಐ ಯಾವುದೇ ತೊಂದರೆಯಿಲ್ಲದ ಸರಳವಾದ ಚಿಕಿತ್ಸೆಯಾಗಿದೆ. ಈ ಮೂಲಕ ಸಂತಾನೋತ್ಪತ್ತಿಗೆ ಕಡಿಮೆ ಅಪಾಯ ಮತ್ತು ಆರಾಮದಾಯಕ ವಿಧಾನವನ್ನು ನೀಡುತ್ತದೆ.

ಅಗ್ಗದ ಆಯ್ಕೆ: ಐ.ವಿ.ಎಫ್ ಮತ್ತು ಬೇರೆ ಫಲವತ್ತತೆ (ಫರ್ಟಿಲೈಜೇಶನ್) ಚಿಕಿತ್ಸೆಗಳಿಗೆ ಹೋಲಿಸಿದಲ್ಲಿ ಐ.ಯು.ಐ ಅಗ್ಗದ ಅಥವಾ ಕಡಿಮೆ ಖರ್ಚಿನ ಆಯ್ಕೆಯಾಗಿದೆ. ಈ ಮೂಲಕ ಮಕ್ಕಳನ್ನು ಪಡೆಯಲು ಬಯಸುವ ಕುಟುಂಬಗಳಿಗೆ ಬಹಳಷ್ಟು ಜನರಿಗೆ ಇದು ಉತ್ತಮ ಆಯ್ಕೆ.

ಅಗ್ಗದ ಆಯ್ಕೆ: ಐ.ವಿ.ಎಫ್ ಮತ್ತು ಬೇರೆ ಫಲವತ್ತತೆ (ಫರ್ಟಿಲೈಜೇಶನ್) ಚಿಕಿತ್ಸೆಗಳಿಗೆ ಹೋಲಿಸಿದಲ್ಲಿ ಐ.ಯು.ಐ ಅಗ್ಗದ ಅಥವಾ ಕಡಿಮೆ ಖರ್ಚಿನ ಆಯ್ಕೆಯಾಗಿದೆ. ಈ ಮೂಲಕ ಮಕ್ಕಳನ್ನು ಪಡೆಯಲು ಬಯಸುವ ಕುಟುಂಬಗಳಿಗೆ ಬಹಳಷ್ಟು ಜನರಿಗೆ ಇದು ಉತ್ತಮ ಆಯ್ಕೆ.

ಐ.ಯು.ಐ ಚಿಕಿತ್ಸೆಯನ್ನು ಯಾವಾಗ ಪಡೆಯಬೇಕು?

ಕಾರಣರಹಿತ ಬಂಜೆತನ: ಅಕಾರಣವಾಗಿ ಬಂಜೆತನ ಅನುಭವಿಸುತ್ತಿರುವ ದಂಪತಿಗಳಿಗೆ ಐ.ಯು.ಐ ಒಂದು ಪರಿಣಾಮಕಾರಿ ಪರಿಹಾರವಾಗಿದ್ದು, ಬೇರೆ ಕ್ಲಿಷ್ಟ ಚಿಕಿತ್ಸೆಗಳಿಗೆ ಹೋಲಿಸಿದರೆ ಸರಳ ಚಿಕಿತ್ಸಾ ವಿಧಾನವಾಗಿದೆ. 

ಪುರುಷರಲ್ಲಿಯ ಅಲ್ಪ ಬಂಜೆತನ: ಪುರುಷ ಸಂಗಾತಿಗಳು ವೀರ್ಯಾಣುವಿನ ಅಲ್ಪ ಅಸಹಜತೆಗಳನ್ನು ಹೊಂದಿರುವ ಸಂದರ್ಭಗಳಲ್ಲಿ, ಆರೋಗ್ಯಕರ ವೀರ್ಯವನ್ನು ನೇರವಾಗಿ ಮಹಿಳೆಯ ಗರ್ಭಾಶಯಕ್ಕೆ ಸೇರಿಸುವ ಮೂಲಕ ಐ.ಯು.ಐ, ಗರ್ಭಧಾರಣೆಯನ್ನು ಸುಗಮಗೊಳಿಸುತ್ತದೆ. 

ಗರ್ಭಕಂಠದ ಸಮಸ್ಯೆಯ ಬಂಜೆತನ: ವೀರ್ಯಾಣು ಚಲನೆಗೆ ಅಡ್ಡಿಯಾಗುವ ಗರ್ಭಕಂಠದ ಲೋಳೆಯ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರಿಗೆ, ಐ.ಯು.ಐ, ವೀರ್ಯವನ್ನು ನೇರವಾಗಿ ಗರ್ಭಾಶಯದ ಕುಹರದೊಳಗೆ ತಲುಪಿಸುವ ಮೂಲಕ ಈ ಅಡೆತಡೆಯನ್ನು ಬೈಪಾಸ್ ಮಾಡುತ್ತದೆ.

ಐ.ಯು.ಐ ಚಿಕಿತ್ಸೆಯು, ಫಲವತ್ತತೆ(ಫರ್ಟಿಲೈಜೇಶನ್) ಸವಾಲುಗಳನ್ನು ಎದುರಿಸುವ ದಂಪತಿಗಳಿಗೆ ಉತ್ತಮ ಮತ್ತು ಅವಕಾಶಪೂರ್ಣ ಆಯ್ಕೆಯನ್ನು ನೀಡುತ್ತದೆ. ಸರಳ ಪ್ರಕ್ರಿಯೆ, ಕಡಿಮೆ ಖರ್ಚಿನ ಮತ್ತು ಎಲ್ಲದಕ್ಕೂ ಅನ್ವಯವಾಗುವಂತಹ ಐ.ಯು.ಐ ವಿಧಾನ ವಿವಿಧ ರೀತಿಯ ಬಂಜೆತನ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಭರವಸೆಯ ಬೆಳಕಾಗಿದೆ. ಗಮನ ಪೂರ್ವಕ ಮೇಲ್ವಿಚಾರಣೆ, ಸುಧಾರಿತ ತಂತ್ರಗಳು ಮತ್ತು ಸಹಾನುಭೂತಿ ಪೂರ್ವಕ ಆರೈಕೆಯೊಂದಿಗೆ, ಈ ಕಾರ್ಯವಿಧಾನ ದಂಪತಿಗಳ ಮಕ್ಕಳನ್ನು ಪಡೆಯುವ ಕನಸನ್ನು ನನಸುಗೊಳಿಸುತ್ತದೆ.

Book an Appointment

Please enable JavaScript in your browser to complete this form.