ಮೈಕ್ರೋಸ್ಕೋಪಿಕ್ ಸ್ಪರ್ಮ್ ಇಂಜೆಕ್ಷನ್: ಶಕ್ತಿಯುತ ದೂರದರ್ಶಕದ ಅಡಿ ಒಂದು ಅಂಡಾಣುವಿಗೆ ಒಂದೇ ಶುಕ್ರಾಣುವನ್ನು ನಿಖರವಾಗಿ ಸೇರಿಸುವ ಪ್ರಕ್ರಿಯೆಯಾಗಿದೆ. ಇದು ನೈಸರ್ಗಿಕ ಗರ್ಭಧಾರಣೆಯ ಅಡೆತಡೆಗಳನ್ನು ಮೀರಿ ಕಾರ್ಯನಿರ್ವಹಿಸುತ್ತದೆ.
ಪುರುಷ ಬಂಜೆತನವನ್ನು ನಿವಾರಿಸುವುದು : ಐ.ಸಿ.ಎಸ್.ಐ ಕಡಿಮೆ ಶುಕ್ರಾಣು ಎಣಿಕೆ, ದುರ್ಬಲ ಶುಕ್ರಾಣು ಚಾಲನೆ ಅಥವಾ ಅಸಹಜ ಶುಕ್ರಾಣು ಆಕಾರದಂತಹ, ಪುರುಷ ಬಂಜೆತನ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.
ಹೆಚ್ಚಿದ ಫಲೀಕರಣ(ಫರ್ಟಿಲೈಜೇಶನ್) ಸಾಧ್ಯತೆಗಳು: ನೇರವಾಗಿ ವೀರ್ಯಾಣು-ಅಂಡಾಣುಗಳು ಒಂದಾಗುವ ಕ್ರಿಯೆಯನ್ನು ಸುಗಮಗೊಳಿಸುವ ಮೂಲಕ, ಸಾಂಪ್ರದಾಯಿಕ ಐ.ವಿ.ಎಫ್ ವಿಫಲವಾದ ಸಂದರ್ಭಗಳಲ್ಲಿಯೂ ಐ.ಸಿ.ಎಸ್.ಐ, ಫಲೀಕರಣ(ಫರ್ಟಿಲೈಜೇಶನ್) ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಜೆನೆಟಿಕ್ ಸ್ಕ್ರೀನಿಂಗ್: ಅನುವಂಶಿಕ ಅಸಹಜತೆಗಳಿಗಾಗಿ ವೀರ್ಯಾಣು ಮತ್ತು ಭ್ರೂಣಗಳನ್ನು ಪರೀಕ್ಷಿಸಲು ಐ.ಸಿ.ಎಸ್.ಐ ದಾರಿ ಮಾಡಿಕೊಡುತ್ತದೆ. ಇದು ಮುಂದೆ ಜನಿಸುವ ಸಂತಾನಕ್ಕೆ ಅನುವಂಶಿಕ ಪರಿಸ್ಥಿತಿ/ ಸಮಸ್ಯೆಗಳು ರವಾನೆಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ವೈಯಕ್ತಿಕ ಗಮನ ನೀಡುವಿಕೆ: ಪ್ರತಿ ಐ.ಸಿ.ಎಸ್.ಐ ಕಾರ್ಯವಿಧಾನವನ್ನು ದಂಪತಿಗಳ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಅವರ ವೈದ್ಯಕೀಯ ಇತಿಹಾಸ(ಮುಂಚಿನ ಸಮಸ್ಯೆಗಳು) ಮತ್ತು ಫಲವತ್ತತೆಯ ಸವಾಲುಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತದೆ..
ಸಮಗ್ರ ಬೆಂಬಲ: ಐ.ಸಿ.ಎಸ್.ಐ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಆ ಪ್ರಕ್ರಿಯೆಯ ಉದ್ದಕ್ಕೂ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಇದರಲ್ಲಿ ಆಪ್ತ ಸಮಾಲೋಚನೆ, ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಸೇರಿರುತ್ತದೆ. ಇದು ಸುಗಮ ಮತ್ತು ಯಶಸ್ವಿ ಫಲವತ್ತತೆಯ ಪ್ರಯಾಣಕ್ಕೆ ಕಾರಣವಾಗುತ್ತದೆ.